Surprise Me!

ಕೋಲಾರದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆ ಆರ್ಭಟ | Kolar | Rain | Public TV

2022-09-16 0 Dailymotion

ಕೋಲಾರ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 399 ಮಿ.ಮೀ ಮಳೆಯಾಗಬೇಕಿತ್ತು, ಆದ್ರೆ ಈ ಬಾರಿ 890 ಮಿಲಿ ಮೀಟರ್ ಮಳೆಯಾಗಿದೆ ಅಂತ ಕೋಲಾರ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪದೇವಿ ಮಾಹಿತಿ ನೀಡಿದ್ದಾರೆ.. ಅದರಲ್ಲೂ ವಿಶೇಷವಾಗಿ ಫೆಬ್ರವರಿ ತಿಂಗಳನ್ನ ಹೊರತುಪಡಿಸಿದ್ರೆ ಉಳಿದ ಎಲ್ಲಾ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ಈ ವರ್ಷ ಹೆಚ್ಚು ತೇವಾಂಶ ಇರುವುದರಿಂದ ಭಿತ್ತನೆ ಕಾರ್ಯ ಕೂಡ ಕುಂಠಿತವಾಗಿದೆ. ಗೊಬ್ಬರದ ವಿಚಾರಕ್ಕೆ ಬಂದ್ರೆ ಬೇಡಿಕೆ ಹೆಚ್ಚಾದ ಹಿನ್ನೆಲೆ ನ್ಯಾನೋ ಯೂರಿಯಾ ಕೂಡ ಬಳಸಲು ರೈತರಿಗೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ 118 ಹೆಕ್ಟೇರ್‍ನಷ್ಟು ಕೃಷಿ ಬೆಳೆಗಳು ನಾಶವಾಗಿದ್ದು, ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. <br /><br />#publictv #kolar #rain

Buy Now on CodeCanyon